¡Sorpréndeme!

ಪ್ರಧಾನಿ ಮೋದಿಗೆ 'ಹರ್ ಘರ್ ತಿರಂಗಾ' ಅಭಿಯಾನದ ಸಲಹೆ ನೀಡಿದ ಕನ್ನಡಿಗ | Har Ghar Tiranga | Narendra Modi

2022-08-12 1 Dailymotion

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಮನೆ-ಮನೆ ಮೇಲೆ, ಧ್ವಜ ಹಾರಿಸುವ ನಿಟ್ಟಿನಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ಕೇಂದ್ರ ಘೋಷಿಸಿದೆ. ಆದ್ರೆ ಮೋದಿಗೆ ಈ ಪ್ಲಾನ್ ನೀಡಿದ್ದೆ ನಮ್ಮ ಕನ್ನಡಿಗ. ಭವಾನಿ ನಗರದ ನಿವಾಸಿ ದೀಪಕ್ ಬೋಚಗೇರಿ ಕಳೆದ ಏಳು ತಿಂಗಳ ಹಿಂದೆ ಹರ್ ಘರ್ ತಿರಂಗಾ ಅಭಿಯಾನ ನಡೆಸುವಂತೆ ಕೇಂದ್ರಕ್ಕೆ ಸಲಹೆ ನೀಡಿದ್ರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಪ್ರಧಾನಿ ಮಂತ್ರಿಗಳ ಕಚೇರಿಗೆ ಅಧಿಕೃತವಾಗಿ ಕಳೆದ ಜನವರಿ 26ರಂದು ವಿವರವಾದ ಸ್ಲೋಗನ್‍ಗಳ ಜೊತೆ ಹರ್ ಘರ್ ತಿರಂಗಾ ಅಭಿಯಾನ ನಡೆಸುವಂತೆ ಸಲಹೆ ನೀಡಿದ್ದರು. ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ದೀಪಕ್ ದೇಶದ ಮೇಲೆ ಮೊದಲಿಂದಲೂ ಅಪಾರವಾದ ಪ್ರೀತಿ ಹೊಂದಿದ್ದಾರೆ. ಪ್ರತಿ ಆಗಸ್ಟ್ 15ರಂದು ಹಬ್ಬದ ರೀತಿ ಸಂಭ್ರಮಿಸುತ್ತಿದ್ದ ದೀಪಕ್ ತಮ್ಮ ಮನೆಯ ಮೇಲೆ ಧ್ವಜ ಹಾರಿಸುತ್ತಿದ್ದರು. ಈಗ ಇದೇ ಐಡಿಯಾವನ್ನು ಮೋದಿಯವರಿಗೆ ನೀಡಿದ್ದಾರೆ.

#publictv #harghartiranga #hubli